ಮಂಗಳೂರು:ದೇಶದಲ್ಲಿ ,ರಾಜ್ಯದಲ್ಲಿ ಪ್ರಕೃತಿ ವಿಕೋಪದಲ್ಲಿ ಹಲವರು ಜೀವ ಕಳೆದುಕೊಂಡಿದ್ದಾರೆ.ಕರ್ನಾಟಕದ ಶಿರೂರು, ನೆರೆಯ ಕೆರಳದ ವಯನಾಡ್ ನಲ್ಲಿ ಭೂಕುಸಿತ ಆಗಿದೆ.ವಯನಾಡ್ ನಲ್ಲಿ ನಡೆದ ದುರಂತದಲ್ಲಿ ಲೆಕ್ಕ ಸಿಗದಷ್ಟು ಸಾವು ನೋವುಗಳಾಗಿವೆ.ಈ ಘಟನೆಗೆ ಸಂತಾಪ ಸೂಚಿಸುವುದಾಗಿ ಮಾಜಿ ಸಚಿವ ಬಿ ರಮಾನಾಥ್ ರೈ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜಕೀಯ ವಿಚಾರ ಮುಂದಿಟ್ಟು ಸರ್ಕಾರದ ಮೇಲೆ, ಪಕ್ಷದ ಮೇಲೆ ಒತ್ತಡ ತಂದು ಸರ್ಕಾರವನ್ನು ಮತ್ತು ಸಿದ್ದರಾಮಯ್ಯ ಅವರನ್ನು ಅಸ್ಥಿರ ಮಾಡಲು ಮುಂದಾಗಿ ಬಿಜೆಪಿ ಪಕ್ಷ ಪಾದಯಾತ್ರೆ ಮಾಡುತ್ತಿದೆ.
ಈ ಪಾದಯಾತ್ರೆಯ ಉದ್ದೇಶವೇ ಸರ್ಕಾರವನ್ನು ಅಸ್ಥಿರಗೊಳಿಸುವುದಾಗಿದೆ.ಅಧಿಕಾರವನ್ನು ದುರ್ಬಳಕೆ ಮಾಡಿ ಗವರ್ನರ್ ಮೂಲಕ ನೋಟಿಸ್ ನೀಡಿದ್ದಾರೆ.ಕುಮಾರ ಸ್ವಾಮಿ ಹಗರಣ, ಜನಾರ್ದನ ರೆಡ್ಡಿ ಹಗರಣ, ಸಿಎಂ ಸ್ಥಾನಕ್ಕೆ ಎಷ್ಟು ಹಣ ಕೊಡಬೇಕು ಎಂದು ಯತ್ನಾಳ್ ಹೇಳಿಕೆ ಸೇರಿದಂತೆ ಭ್ರಷ್ಟಾಚಾರದ ಮೂಟೆಗಳನ್ನು ಮೈ ಮೇಲೆ ಹೊತ್ತು ಈ ಪಾದಯಾತ್ರೆ ಮಾಡುತ್ತಿದ್ದಾರೆ.
ಮೂಡಾ ಹಗರಣ ಎಂದು ಹೇಳಿ ಸರ್ಕಾರವನ್ನು ಬೀದಿಗೆ ತರುವ ಯತ್ನ ಮಾಡಲಾಗುತ್ತಿದ್ದು ಪ್ರಜಾತಂತ್ರ ವ್ಯವಸ್ಥೆಗೆ ದಕ್ಕೆ ತರುವ ಕೆಲಸ ನಡೆಯುತ್ತಿದೆ.ಬುದ್ದಿವಂತರ ಜಿಲ್ಲೆಯ ಜನರು ಇದನ್ನು ನಂಬಲು ಸಾಧ್ಯವಿಲ್ಲ.ನಾನು ಅರಣ್ಯ ಸಚಿವನಾಗುವ ಮೊದಲು ಬಳ್ಳಾರಿಯಲ್ಲಿ 60 % ಗಣಿಗಾರಿಕೆ ಅರಣ್ಯ ಪ್ರದೇಶದಲ್ಲಿ ಆಗಿತ್ತು.
ನಾವು ಆಡಳಿತಕ್ಕೆ ಬಂದ ಬಳಿಕ ಒಂದು ಸಣ್ಣ ಅರಣ್ಯ ಜಮೀನಿನಲ್ಲಿ ಕೂಡ ಗಣಿಗಾರಿಕೆ ಆಗಿಲ್ಲ.ಇದು ಸಿದ್ದರಾಮಯ್ಯ ಅವರ ಆಡಳಿತವಾಗಿದೆ.ಮೂಡಾದಲ್ಲಿ ನಡೆದ ಹಗರಣ ಇದು ಹಗರಣವೇ ಅಲ್ಲ.ಕಾಂಗ್ರೆಸ್ ಮತ್ತು ಸರ್ಕಾರವನ್ನು ಬೀದಿಗೆ ತರಲು ಬಿಜೆಪಿ ರಾಜಕೀಯ ಮಾಡುತ್ತಿದೆಯೇ ಹೊರತು ಮೂಡಾದಲ್ಲಿ ಯಾವುದೇ ಹಗರಣ ಆಗಿಲ್ಲ ಎಂದು ರಮಾನಾಥ ರೈ ಹೇಳಿದ್ದಾರೆ.