ಬೆಂಗಳೂರು: ಭಾರತ ಚುನಾವಣಾ ಆಯೋಗವು 2023ರ ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯ ಸಿದ್ದತೆಯನ್ನು ಪರಿಶೀಲಿಸಲು ಮಾ.9ರಂದು ರಾಜ್ಯಕ್ಕೆ ಭೇಟಿ ನೀಡಲಿದೆ.
ಈ ವೇಳೆ ರಾಷ್ಟ್ರೀಯ ಆಯೋಗವು ವಿಧಾನ ಸೌಧದ ಕೊಠಡಿ ಸಂಖ್ಯೆ 422ರಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳೊಂದಿಗೆ ಸಭೆಯನ್ನು ನಡೆಸಲಿದೆ . ಇದಕ್ಕಾಗಿ ಅಪರಾಹ್ನ 2:30ರಿಂದ ಸಂಜೆ 4 ರ ವರೆಗೆ ಸಮಯ ಮೀಸಲಿಟ್ಟು ವಿವಿಧ ಪಕ್ಷಗಳಿಗೆ ನೋಟೀಸು ನೀಡಲಾಗಿದೆ.